
ಮುಂಗಾರು ಮಳೆಯ ಅಬ್ಬರದಿಂದಾಗಿ ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 47ಕ್ಕೆ ಇಳಿಕೆಯಾಗಿದ್ದು, ಗಾಳಿಯ ಗುಣಮಟ್ಟ ಅತ್ಯುತ್ತಮ ಮಟ್ಟಕ್ಕೆ ಸುಧಾರಿಸಿದೆ.
ನಗರದ ಸಿಟಿ ಸೆಂಟರ್ ಮತ್ತು ಜಯನಗರದಲ್ಲಿ 35-45 AQI ದಾಖಲಾಗಿದ್ದರೆ, ಪೀಣ್ಯ ಮತ್ತು ವೈಟ್‌ಫೀಲ್ಡ್‌ನಲ್ಲಿ 50-65 AQI ನೊಂದಿಗೆ ಗಾಳಿ ಸಾಧಾರಣ ಸ್ಥಿತಿಯಲ್ಲಿದೆ.
ಮೈಸೂರು, ಮಡಿಕೇರಿ, ಮಂಗಳೂರು ಮತ್ತು ಉಡುಪಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿಯೂ ಮಳೆಯಿಂದಾಗಿ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸಿಪಿಸಿಬಿ ವರದಿ ತಿಳಿಸಿದೆ.