
ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಕಾರ್ಖಾನೆ ವಿರೋಧಿ ಹೋರಾಟಗಾರರು ಬಹಿರಂಗ ಪತ್ರ ಬರೆದು ಪರಿಸರ ಸಮಸ್ಯೆಗಳ ಪರಿಹಾರಕ್ಕೆ ಒತ್ತಡ ತರುವಂತೆ ಮನವಿ ಮಾಡಿದ್ದಾರೆ.
ಕೊಪ್ಪಳದ 22 ಹಳ್ಳಿಗಳಲ್ಲಿ 28 ಮಾಲಿನ್ಯಕಾರಿ ಬೃಹತ್ ಕಾರ್ಖಾನೆಗಳಿಂದ ಕೃಷಿ ನಾಶವಾಗಿ ಜನರಲ್ಲಿ ಕ್ಯಾನ್ಸರ್ ಸೇರಿದಂತೆ ಭಯಾನಕ ರೋಗಗಳು ಹೆಚ್ಚಾಗುತ್ತಿವೆ ಎಂದು 'ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ' ಕಳವಳ ವ್ಯಕ್ತಪಡಿಸಿದೆ.
ತುಂಗಭದ್ರಾ ನದಿ ಮಾಲಿನ್ಯ ತಡೆ, ಕಾರ್ಖಾನೆಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಹಾಗೂ ಐಐಎಸ್ಸಿ ಮೂಲಕ ಪರಿಸರ ಅಧ್ಯಯನ ನಡೆಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವಂತೆ ಸ್ವಾಮೀಜಿಯಲ್ಲಿ ವಿನಂತಿಸಲಾಗಿದೆ.