
ನವದೆಹಲಿಯ ಭಾರತ ಮಂಟಪದಲ್ಲಿ 45ನೇ ಆವೃತ್ತಿಯ 'ವಿಕಾಸ್ ಔರ್ ವಿರಾಸತ್' ಥೀಮ್ನಡಿ ಅಂತಾರಾಷ್ಟ್ರೀಯ ವ್ಯಾಪಾರ ಮೇಳವು ನವೆಂಬರ್ 13 ರಿಂದ 27ರವರೆಗೆ ನಡೆಯಲಿದೆ.
ಇಂಡಿಯಾ ಟ್ರೇಡ್ ಪ್ರೊಮೋಷನ್ ಆರ್ಗನೈಸೇಶನ್ ಆಯೋಜಿಸುವ ಈ ಮೇಳದಲ್ಲಿ ದೇಶ ವಿದೇಶಗಳಿಂದ 3,500ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ.
ಈ ಮೇಳದಲ್ಲಿ ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಪಾಲುದಾರ ರಾಜ್ಯಗಳಾಗಿ ಭಾಗವಹಿಸುತ್ತಿವೆ.