
ಜಪಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 45 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ತಂಡವು 124 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಅಂದರೆ 11 ಬಾರಿ 100 ಕ್ಕಿಂತ ಅಧಿಕ ರನ್ ಅಂತರದಿಂದ ಗೆದ್ದ ತಂಡವೆಂಬ ವಿಶ್ವ ದಾಖಲೆಯನ್ನು ಭಾರತ ನಿರ್ಮಿಸಿದೆ.
ಇದಕ್ಕೂ ಮುನ್ನ 90 ಪಂದ್ಯಗಳಲ್ಲಿ 10 ಬಾರಿ ಇಂತಹ ಬೃಹತ್ ಗೆಲುವುಗಳನ್ನು ಸಾಧಿಸುವ ಮೂಲಕ ಕೆನಡಾ ತಂಡವು ಅಗ್ರಸ್ಥಾನದಲ್ಲಿದ್ದು, ಆ ವಿಶ್ವ ದಾಖಲೆಯನ್ನು ಈಗ ಟೀಮ್ ಇಂಡಿಯಾ ಮುರಿದಿದೆ.