
ಓಲ್ಡ್ ಮಾಂಕ್ ರಮ್ ಮತ್ತು ಆ್ಯಂಟಿಕ್ವಿಟಿ, ರಾಯಲ್ ಚಾಲೆಂಜ್ ಸೇರಿದಂತೆ ಪ್ರಮುಖ ಮದ್ಯದ ಬ್ರ್ಯಾಂಡ್‌ಗಳಲ್ಲಿ ಕೃತಕ ಫ್ಲೇವರ್ ಮತ್ತು ಬಣ್ಣಗಳನ್ನು ಬೆರೆಸಿರುವುದು ಎಫ್‌ಎಸ್‌ಎಸ್‌ಎಐ ತಪಾಸಣೆಯಲ್ಲಿ ಪತ್ತೆಯಾಗಿದೆ.
7 ಮತ್ತು 12 ವರ್ಷ ಹಳೆಯ ಮದ್ಯ ಎಂದು ಲೇಬಲ್ ಹಾಕಿದ್ದರೂ, ಪ್ರಯೋಗಾಲಯದ ವರದಿಯಲ್ಲಿ ಅವು ಕನಿಷ್ಠ 1 ವರ್ಷವೂ ಬ್ಲೆಂಡ್ ಆಗಿಲ್ಲ ಎಂಬುದು ಸಾಬೀತಾಗಿದೆ.
ಗ್ರಾಹಕರಿಗೆ ಮೋಸ ಮಾಡುತ್ತಿರುವ ಈ ಬ್ರ್ಯಾಂಡ್‌ಗಳನ್ನು ನಿರ್ಬಂಧಿಸಲು ಎಫ್‌ಎಸ್‌ಎಸ್‌ಎಐ ಸೂಚಿಸಿದ್ದು, ಮದ್ಯ ತಯಾರಿಕಾ ಕಂಪನಿಗಳ ವಿರುದ್ಧ ಕಠಿಣ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.