ಭಾರತ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಜುಲೈ 23ರ ಗುರು ಪೂರ್ಣಿಮೆಯಂದು ತಮ್ಮ ಕೋಚ್ ದಿವಂಗತ ರಮಾಕಾಂತ್ ಆಚ್ರೇಕರ್ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
ಮುಂಬೈನ ಶಿವಾಜಿ ಪಾರ್ಕ್ನಲ್ಲಿರುವ ಆಚ್ರೇಕರ್ ಅವರ ಸ್ಮಾರಕಕ್ಕೆ ಭೇಟಿ ನೀಡಿದ ಸಚಿನ್, ತಮ್ಮ ಯಶಸ್ಸಿಗೆ ಕಾರಣರಾದ ಗುರುವಿಗೆ ಕೃತಜ್ಞತೆ ಸಲ್ಲಿಸಿ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
24 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 34,357 ರನ್ ಮತ್ತು 100 ಶತಕಗಳನ್ನು ಗಳಿಸಿರುವ ಸಚಿನ್, ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ರೂಪಿಸಿದ ಆಚ್ರೇಕರ್ ಅವರ ಶಿಸ್ತನ್ನು ಸ್ಮರಿಸಿದ್ದಾರೆ.