
'ಅರಾಜಕತೆ ಸೃಷ್ಟಿ ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ' ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ತಿರುಚಲಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಾನು ಭಾಷಣ ಮಾಡುವ ಸಮಯದಲ್ಲಿ ಪಕ್ಷದ ಬಗ್ಗೆ ಹೇಳಿದ್ದೇನೆ ಹೊರತು ವ್ಯಕ್ತಿಗತವಾಗಿ ಯಾರನ್ನೂ ನೋಯಿಸಿಲ್ಲ, ಇದು ಪ್ರಚೋದನಕಾರಿ ಹೇಳಿಕೆ ಅಲ್ಲ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.
ಈ ಹೇಳಿಕೆಯು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಅವರ ಮನೆಗೆ ಮುತ್ತಿಗೆ ಹಾಕಲು ಕೂಡ ಯತ್ನಿಸಿದ್ದಾರೆ.