
ಟೀಂ ಇಂಡಿಯಾದ ಮಾಜಿ ವೇಗದ ಬೌಲರ್, 42 ವರ್ಷದ ವಿನಯ್ ಕುಮಾರ್ ಅವರನ್ನು ಮುಂಬರುವ ದೇಶೀಯ ಕ್ರಿಕೆಟ್ ಸೀಸನ್‌ಗಾಗಿ ಕರ್ನಾಟಕ ರಣಜಿ ತಂಡದ ನೂತನ ಮುಖ್ಯ ಕೋಚ್ ಆಗಿ ಕೆಎಸ್‌ಸಿಎ ನೇಮಕ ಮಾಡಿದೆ.
ಯೆರೆ ಗೌಡ್ ಅವರ ಸ್ಥಾನಕ್ಕೆ ನೇಮಕವಾಗಿರುವ ವಿನಯ್ ಕುಮಾರ್ ಜೊತೆಗೆ, ಕರ್ನಾಟಕದ ಮಾಜಿ ಬ್ಯಾಟ್ಸ್‌ಮನ್ ದೀಪಕ್ ಚೌಗುಲೆ ಅವರನ್ನು ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ರಣಜಿ ಟ್ರೋಫಿ ಇತಿಹಾಸದಲ್ಲಿ 442 ವಿಕೆಟ್ ಪಡೆದಿರುವ ವಿನಯ್ ಕುಮಾರ್ ಮಾರ್ಗದರ್ಶನದ ಕರ್ನಾಟಕ ತಂಡವು ಅಕ್ಟೋಬರ್ 11 ರಂದು ಆಂಧ್ರಪ್ರದೇಶ ವಿರುದ್ಧದ ಪಂದ್ಯದೊಂದಿಗೆ ತನ್ನ ಹೊಸ ಸೀಸನ್ ಆರಂಭಿಸಲಿದೆ.