
ಯುರೋಪ್‌ನ ಇಟಿಪಿಎಲ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಮಾಲೀಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲನುಭವಿಸಿ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ.
ಇಂದು ನಡೆದ ಪಂದ್ಯದಲ್ಲಿ ಡಬ್ಲಿನ್ ಗಾರ್ಡಿಯನ್ಸ್ 178 ರನ್ ಗಳಿಸಿದರೂ, ರೋಟರ್ಡ್ಯಾಮ್ ಡಾಕರ್ಸ್ ನಾಯಕ ಫಾಫ್ ಡುಪ್ಲೆಸಿಸ್ 51 ಎಸೆತಗಳಲ್ಲಿ 79 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು.
ಡಬ್ಲಿನ್ ತಂಡದ ಪರ ಜೇಮ್ಸ್ ವಿನ್ಸ್ ಅಜೇಯ 95 ರನ್ ಗಳಿಸಿದರೂ, ತಂಡದ ಬೌಲಿಂಗ್ ವೈಫಲ್ಯದಿಂದಾಗಿ ರೋಟರ್ಡ್ಯಾಮ್ ಡಾಕರ್ಸ್ 18.4 ಓವರ್‌ಗಳಲ್ಲಿ ಗುರಿ ತಲುಪಿತು.