
ಫ್ರಾನ್ಸ್‌ನ ನೈರುತ್ಯ ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾಳ್ಗಿಚ್ಚಿನಿಂದಾಗಿ ಭಾನುವಾರ ಒಂದೇ ದಿನ 55 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಈವರೆಗೆ ಒಟ್ಟು 2.2 ಲಕ್ಷ ಜನರು ಮನೆ ತೊರೆದಿದ್ದು, ಸುಮಾರು 42 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವು ಬೆಂಕಿಗೆ ಆಹುತಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆಯ ಸ್ಪೇನ್‌ನಲ್ಲಿಯೂ ಕಾಳ್ಗಿಚ್ಚಿನ ತೀವ್ರತೆ ಹೆಚ್ಚಾಗಿದ್ದು, ಅಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಈವರೆಗೆ 1.16 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ.