
ಕಳೆದ ಎರಡು ವಾರಗಳಿಂದ ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸುತ್ತಿರುವ ಭೀಕರ ಹಠಾತ್ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ನೆರವಾಗಲು ಇಶಾ ಫೌಂಡೇಶನ್ ಜಾಗತಿಕ ಮಟ್ಟದಲ್ಲಿ ಕಾರ್ಯಾಚರಣೆಗೆ ಇಳಿದಿದೆ.
ಪ್ರವಾಹ ಸಂಭವಿಸಿದ ತಕ್ಷಣವೇ ನೇಪಾಳದ ಸ್ಥಳೀಯ ಸ್ವಯಂಸೇವಕರು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಂತ್ರಸ್ತ ಕುಟುಂಬಗಳಿಗೆ ತುರ್ತು ಆಸರೆ ಹಾಗೂ ಸಾಂತ್ವನ ಒದಗಿಸುತ್ತಿದ್ದಾರೆ.
ಪ್ರವಾಹ ಪೀಡಿತ ಪ್ರದೇಶದ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತ ಅಧಿಕೃತ ಮಾಹಿತಿಯನ್ನು ಕುಟುಂಬಗಳಿಗೆ ನಿಯಮಿತವಾಗಿ ತಲುಪಿಸಲಾಗುತ್ತಿದೆ.