
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನವೆಂಬರ್ 7ರಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಯುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ರಾಜ್ಯದ ಬರ ಪರಿಸ್ಥಿತಿ ಮತ್ತು ಜಲಾಶಯಗಳಲ್ಲಿ ನೀರಿನ ಒಳಹರಿವು ಕಳೆದ 30 ವರ್ಷಗಳ ಸರಾಸರಿಗಿಂತ ಶೇ. 53.88ರಷ್ಟು ಕಡಿಮೆಯಾಗಿರುವ ಅಂಶವನ್ನು ಕರ್ನಾಟಕ ಸಭೆಯಲ್ಲಿ ಮಂಡಿಸಿತ್ತು.
ಈ ಆದೇಶದಿಂದಾಗಿ ಕರ್ನಾಟಕದ ಜಲಾಶಯಗಳ ಸಂಗ್ರಹ ಮತ್ತು ಮುಂದಿನ ಬೇಸಿಗೆಯ ನೀರಿನ ಅಗತ್ಯತೆಯ ದೃಷ್ಟಿಯಿಂದ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಿದೆ.