
ನ್ಯೂಯಾರ್ಕ್ನಲ್ಲಿ ನಡೆದ ಸೆಮಾಫೋರ್ನ 'The Next 3 Billion' ಶೃಂಗಸಭೆಯಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿ ಶಂಕರ್, ಶಾಂತಿಯಿಲ್ಲದಿದ್ದರೆ ಸಮೃದ್ಧಿ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ಹೊಂದಿರುವವರು ಮತ್ತು ವಂಚಿತರ ನಡುವಿನ ಅಂತರವನ್ನು ಕಡಿಮೆ ಮಾಡಲು ಎರಡೂ ಕಡೆಯಿಂದ ಪ್ರಯತ್ನ ಅಗತ್ಯ ಎಂದು ಅವರು ಹೇಳಿದರು.
ಉದ್ಯಮಶೀಲತೆಯ ಮನೋಭಾವ ಬೆಳೆಸುವ ಮೂಲಕ ಗ್ರಾಮೀಣ ಭಾರತದ 500 ನಿರುದ್ಯೋಗಿ ಯುವಕರಲ್ಲಿ ಬದಲಾವಣೆ ತಂದ ಕಾರ್ಯಕ್ರಮವನ್ನು ಕೀನ್ಯಾ, ಘಾನಾ, ನೈಜೀರಿಯಾ, ಬೋಟ್ಸ್ವಾನಾ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.