
ನಟ ಟೊವಿನೋ ಥಾಮಸ್ ಅವರ ಹೆಸರನ್ನು ಬಳಸಿಕೊಂಡು tovinothomas79@gmail.com ಇಮೇಲ್ ವಿಳಾಸದ ಮೂಲಕ ಸೈಬರ್ ವಂಚಕರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.
ಈ ಇಮೇಲ್ ಐಡಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ನಟ, ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ವಂಚಕರು ಬ್ಯಾಂಕ್ ವಿವರ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ತಕ್ಷಣವೇ ಅದನ್ನು ಸ್ಪ್ಯಾಮ್ ಎಂದು ವರದಿ ಮಾಡಿ ಡಿಲೀಟ್ ಮಾಡುವಂತೆ ಟೊವಿನೋ ಥಾಮಸ್ ಸೂಚಿಸಿದ್ದಾರೆ.