
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಹಾಗೂ ಬಲ್ಕ್ ಆಗಿ ಫಾರ್ಮ್-7 ಸಲ್ಲಿಕೆ ಮಾಡಿರುವವರ ವಿರುದ್ಧ ತನಿಖೆ ನಡೆಸಿ ಅರ್ಹ ಮತದಾರರ ಹಕ್ಕು ರಕ್ಷಿಸುವಂತೆ ಮುಖ್ಯ ಚುನಾವಣಾಧಿಕಾರಿಗೆ ಸಿಎಂ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ.
ಬೆಳಗಾವಿ ಉತ್ತರದಲ್ಲಿ 3,000, ಮೂಡಿಗೆರೆಯಲ್ಲಿ 6,259 ಹಾಗೂ ಬಬಲೇಶ್ವರದಲ್ಲಿ 1,373 ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ, ಎಸ್‌ಸಿ-ಎಸ್‌ಟಿ ಹಾಗೂ ಒಬಿಸಿ ಮತದಾರರನ್ನು ಗುರಿಯಾಗಿಸಿ ಫಾರ್ಮ್-7 ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.
ಎಫ್‌ಐಆರ್ ದಾಖಲಿಸಿ ಕ್ರಿಮಿನಲ್ ಕ್ರಮ ಕೈಗೊಳ್ಳುವವರೆಗೆ ಚುನಾವಣಾ ಆಯೋಗದ ಕಚೇರಿಯಿಂದ ತೆರಳುವುದಿಲ್ಲ ಎಂದು ಸಿಎಂ ಪಟ್ಟು ಹಿಡಿದು ಕೆಲಕಾಲ ಅಲ್ಲೇ ಕುಳಿತುಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿದರು.