
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಭಿಕ್ಷುಕಿಯ ಮನೆಯಲ್ಲಿ 3.5 ಲಕ್ಷ ರೂ. ನಗದು ಪತ್ತೆಯಾಗಿದ್ದು, ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಾಲ್ಕು ದಿನಗಳ ಹಿಂದೆಯಷ್ಟೇ ಮಂಡ್ಯದ ಗುಟ್ಟಲು ಗ್ರಾಮದಲ್ಲಿ ಮೃತಪಟ್ಟ ವೃದ್ಧ ಭಿಕ್ಷುಕಿಯ ಮನೆಯಲ್ಲಿ 8.5 ಲಕ್ಷ ರೂ. ನಗದು ಪತ್ತೆಯಾದ ಘಟನೆ ನಡೆದಿತ್ತು.
ಭಿಕ್ಷುಕರ ಸುರಕ್ಷತೆ ಮತ್ತು ಅವರ ಬಳಿ ಇರುವ ಹಣದ ರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.