
ರಾಜ್ಯದ 15 ಲಕ್ಷ ನಿವೇಶನ ರಹಿತರಿಗೆ ಮೂರು ಹಂತಗಳಲ್ಲಿ ಉಚಿತ ನಿವೇಶನ ಹಂಚಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ನಿವೇಶನ ನೀಡಲಾಗುವುದು.
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಜೀಡರಹಳ್ಳಿ ಗ್ರಾಮದಲ್ಲಿ 19.26 ಎಕರೆ ಜಮೀನಿನಲ್ಲಿ ₹42.83 ಕೋಟಿ ವೆಚ್ಚದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ.
ಡ್ರೋನ್ ಫೆಡರೇಷನ್ ಇಂಡಿಯಾ ಈ ಕೇಂದ್ರದ ನಿರ್ವಹಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಮೂರು ವರ್ಷಗಳ ನಂತರ ಈ ಕೇಂದ್ರವು ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದೆ.