
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು PGCET ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಗಳನ್ನು ಅದಲು-ಬದಲು ಮಾಡಲು ಅಥವಾ ತೆಗೆದುಹಾಕಲು ಸೆಪ್ಟೆಂಬರ್ 19ರವರೆಗೆ ಅವಕಾಶ ನೀಡಿದೆ.
ಮೊದಲ ಸುತ್ತಿನ ತಾತ್ಕಾಲಿಕ ಫಲಿತಾಂಶವು ಸೆಪ್ಟೆಂಬರ್ 19ರಂದು ಸಂಜೆ 5ಕ್ಕೆ ಹಾಗೂ ಅಂತಿಮ ಫಲಿತಾಂಶವು ಸೆಪ್ಟೆಂಬರ್ 21ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳ ಮನವಿ ಮೇರೆಗೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ದಾಖಲಿಸುವ ಸಮಯವನ್ನು ಸೆಪ್ಟೆಂಬರ್ 17ರ ಮಧ್ಯಾಹ್ನ 3 ಗಂಟೆಯವರೆಗೆ ವಿಸ್ತರಿಸಲಾಗಿದೆ.