
ಬರ್ಮುಡಾದಿಂದ 6 ಜನರೊಂದಿಗೆ ಬೋಸ್ಟನ್‌ಗೆ ತೆರಳುತ್ತಿದ್ದ 'ಲ್ಯಾಟಿಟ್ಯೂಡ್ ಏರ್ ಆ್ಯಂಬುಲೆನ್ಸ್' ಸಂಸ್ಥೆಗೆ ಸೇರಿದ ಗಲ್ಫ್‌ಸ್ಟ್ರೀಮ್ G100 ವೈದ್ಯಕೀಯ ತುರ್ತು ಸೇವಾ ವಿಮಾನ ನಾಪತ್ತೆಯಾಗಿದೆ.
ವಿಮಾನವು ಮುಂಜಾನೆ 1.25ಕ್ಕೆ ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು ಆದರೆ ಮಧ್ಯದಲ್ಲೇ ಅಮೆರಿಕದ ಫೆಡರಲ್ ಏವಿಯೇಷನ್ ಆಡಳಿತದೊಂದಿಗೆ ಸಂಪರ್ಕ ಕಳೆದುಕೊಂಡಿತು.
ನ್ಯಾಂಟುಕೆಟ್ ಕರಾವಳಿಯ ಜಲಮೂಲಗಳಲ್ಲಿ ಅಮೆರಿಕದ ಕರಾವಳಿ ಕಾವಲು ಪಡೆ ವಾಯು ಮತ್ತು ನೌಕಾ ಮೂಲಕ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ.