
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಎತ್ತುವ ಚುನಾವಣಾ ಅಕ್ರಮಗಳ ಆರೋಪದ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿದ್ಧರಿದ್ದಾರೆ.
ಬಿಜೆಪಿಯ ‘ಲೋಕತಂತ್ರ ಬಚಾವೋ, ಅರಾಜಕತಾ ಹಟಾವೋ’ ಅಭಿಯಾನದ ಭಾಗವಾಗಿ ಮಾತನಾಡಿದ ಶಾ, ಸಂಸತ್ತಿನಲ್ಲಿ ಚರ್ಚಿಸುವ ಬದಲು ಕಾಂಗ್ರೆಸ್ ಗದ್ದಲ ಮತ್ತು ಪ್ರತಿಭಟನೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.
ಹರಿಯಾಣದ ಕರ್ನಾಲ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚಿಸಲು ರಾಹುಲ್ ಗಾಂಧಿಗೆ ಮುಖಾಮುಖಿ ಚರ್ಚೆಯ ಸವಾಲು ಹಾಕಿದ್ದಾರೆ.