
ಕೇರಳದ ಕೊಟ್ಟಪ್ಪುರಂನ ಸೇಂಟ್ ಆನ್ಸ್ ಹೈಯರ್ ಸೆಕೆಂಡರಿ ಶಾಲೆಯ 11ನೇ ತರಗತಿ ವಿದ್ಯಾರ್ಥಿಗಳಾದ ವಿ.ಜೆ. ಜೋಸ್ಬಿನ್ ಮತ್ತು ಉಮಾ ಶಿವಾನಿ ಗೇರ್ ಹಾಗೂ ಕ್ಲಚ್ ಇಲ್ಲದ 'ಇಕೋ ರೈಡ್' ಮಿನಿ ಕಾರನ್ನು ನಿರ್ಮಿಸಿದ್ದಾರೆ.
ಪೆಟ್ರೋಲ್ ಚಾಲಿತ ಈ ಎರಡು ಸೀಟಿನ ಮಿನಿ ಕಾರನ್ನು ಸ್ಕೂಟರ್ ಮಾದರಿಯಲ್ಲಿ ಕೇವಲ ಆಕ್ಸಿಲರೇಟರ್ ಮತ್ತು ಬ್ರೇಕ್ ಬಳಸಿ ಸುಲಭವಾಗಿ ಚಲಾಯಿಸಬಹುದಾಗಿದೆ.
ಈ ವಿನೂತನ ವಾಹನವು ದಿವ್ಯಾಂಗರಿಗೆ ಹಾಗೂ ಹಳ್ಳಿಯ ಕಿರಿದಾದ ರಸ್ತೆಗಳಲ್ಲಿ ಸಂಚರಿಸಲು ಅನುಕೂಲಕರವಾಗಿದ್ದು, ಕೊಡಂಗಲ್ಲೂರ್ ಉಪ-ಜಿಲ್ಲಾ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ಗಳಿಸಿದೆ.