
ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಲು ಹಳೆಯ ಕಟ್ಟಡಗಳು ಮತ್ತು ಕಿಷ್ಕಿಂದೆಯಂಥ ಸಣ್ಣ ಕೊಠಡಿಗಳಿರುವುದು ಸವಾಲಾಗಿ ಪರಿಣಮಿಸಿದೆ.
ಜಿಲ್ಲೆಯ 1,312 ಶಾಲೆಗಳಲ್ಲಿ 1,37,850 ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ ಆರಂಭದಲ್ಲಿ ನಿರ್ಮಿಸಿದ ಅಡುಗೆ ಮನೆಗಳು ಚಿಕ್ಕದಾಗಿವೆ.
ನರೇಗಾ ಯೋಜನೆಯನ್ನು ವಿಬಿ-ಜಿ ರಾಮ್ ಜಿಯಾಗಿ ಪರಿವರ್ತಿಸಿದ ಕಾರಣ 40 ಶಾಲೆಗಳಲ್ಲಿ ಹೊಸ ಅಡುಗೆ ಮನೆ ನಿರ್ಮಿಸುವ ಕಾರ್ಯೋಜನೆ ವಿಳಂಬವಾಗಿದ್ದು, ಅನುದಾನಕ್ಕಾಗಿ ಕೋರಲಾಗಿದೆ.