
ಹೈದರಾಬಾದ್ ಬಳಿಯ ಎಂವಿಎಸ್ಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ದಾಂಡಿಯಾ ನೈಟ್ ವೇಳೆ ವಿದ್ಯುತ್ ದೀಪ ಅಳವಡಿಸಿದ್ದ ಕಬ್ಬಿಣದ ಸ್ಟ್ಯಾಂಡ್ ಕುಸಿದು ಬಿದ್ದ ಪರಿಣಾಮ 18 ವರ್ಷದ ವಿದ್ಯಾರ್ಥಿನಿ ಸೋನಾ ಮೃತಪಟ್ಟಿದ್ದಾರೆ.
ಸಂಜೆ 7.30ರ ಸುಮಾರಿಗೆ ಬೀಸಿದ ಬಿರುಗಾಳಿಯ ರಭಸಕ್ಕೆ ಸ್ಟ್ಯಾಂಡ್ ಸಮತೋಲನ ಕಳೆದುಕೊಂಡು ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಪ್ಪಳಿಸಿದ್ದು, 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ವಿದ್ಯಾರ್ಥಿನಿ ಸಾವಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.