Health & Environment
ನಂದಿ ಹಿಲ್ಸ್ ಮ್ಯಾರಥಾನ್ ವೇಳೆ ಕ್ರೀಡಾಪಟು ಸಾವು

ನಂದಿ ಹಿಲ್ಸ್ ಮ್ಯಾರಥಾನ್ ವೇಳೆ ಕ್ರೀಡಾಪಟು ಸಾವು

tv9kannada2h
THE BRIEF
1

ನಂದಿ ಹಿಲ್ಸ್‌ನಲ್ಲಿ ನಡೆದ ಮಾನ್ಸೂನ್ ಮ್ಯಾರಥಾನ್ ಓಟದ ವೇಳೆ ಪಂಜಾಬ್ ಮೂಲದ 31 ವರ್ಷದ ಅಮನ್ ದೀಪ್ ಸಿಂಗ್ ಜಗಡೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

2

21 ಕಿಲೋಮೀಟರ್ ಓಟದ ಭಾಗವಾಗಿದ್ದ ಅಮನ್ ದೀಪ್, ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಮೃತದೇಹವನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

3

ಈ ಮ್ಯಾರಥಾನ್‌ನಲ್ಲಿ 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಮೃತ ಅಮನ್ ದೀಪ್ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.