60 ವರ್ಷ ವಯಸ್ಸಿನ ಅಭಿಮನ್ಯು ಆನೆ ಈ ಬಾರಿ ಕೊನೆಯದಾಗಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಲಿದ್ದು, ಮುಂದಿನ ವರ್ಷಕ್ಕೆ ಅರಣ್ಯ ಇಲಾಖೆ ಪರ್ಯಾಯ ಆನೆಯ ಹುಡುಕಾಟದಲ್ಲಿದೆ.
ಕೇಂದ್ರ ಪರಿಸರ ಸಚಿವಾಲಯದ ಮಾರ್ಗಸೂಚಿಯಂತೆ 60 ವರ್ಷ ಮೇಲ್ಪಟ್ಟ ಆನೆಗಳನ್ನು ಭಾರ ಹೊರುವ ಕೆಲಸಕ್ಕೆ ಬಳಸುವಂತಿಲ್ಲದ ಕಾರಣ, ಅಭಿಮನ್ಯುವನ್ನು ಈ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗುತ್ತಿದೆ.
ಅಭಿಮನ್ಯು ನಂತರ ಅಂಬಾರಿ ಹೊರುವ ಸಾಮರ್ಥ್ಯಕ್ಕಾಗಿ ಧನಂಜಯ, ಮಹೇಂದ್ರ ಮತ್ತು ಪ್ರಶಾಂತ ಆನೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಅಭಿಮನ್ಯು ಮುಂದಿನ ದಸರಾಗಳಲ್ಲಿ ಇತರ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾನೆ.