
ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಹಾಗೂ ಅತ್ಯಂತ ವೆಚ್ಚದ 'ರಾಮಾಯಣ' ಸಿನಿಮಾದಲ್ಲಿ ಯುವ ಶೂರ್ಪನಕಿಯ ಪಾತ್ರದಲ್ಲಿ ಬಾಲನಟಿ ದಿಶಿತಾ ಸೆಹ್ಗಲ್ ನಟಿಸಲಿದ್ದಾರೆ.
ಕಠಿಣ ಆಡಿಷನ್ ಹಾಗೂ ಲುಕ್ ಟೆಸ್ಟ್‌ನ ಹಲವು ಸುತ್ತುಗಳ ಬಳಿಕ ನಿರ್ಮಾಪಕರು ಈ ಪಾತ್ರಕ್ಕಾಗಿ ದಿಶಿತಾ ಅವರನ್ನು ಆಯ್ಕೆ ಮಾಡಿದ್ದು, ಆಯ್ಕೆಗೆ ಸುಮಾರು ಒಂದು ವರ್ಷ ಹಿಡಿದಿದೆ.
ದೀಪಾವಳಿ ಪ್ರಯುಕ್ತ ನವೆಂಬರ್ 5ರಂದು ಈ ಚಿತ್ರದ ಮೊದಲ ಭಾಗವು ತೆರೆಕಾಣಲಿದ್ದು, ಮುಂಗಡ ಬುಕಿಂಗ್ ಭರ್ಜರಿಯಾಗಿ ಸಾಗಿದೆ.