
ಕಡಿಮೆ ಬೆಲೆಗೆ ಲಭ್ಯವಿರುವ ಕಡಲೆಕಾಯಿಯಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ನಾರಿನಾಂಶ, ವಿಟಮಿನ್ ಇ ಹಾಗೂ ಖನಿಜಾಂಶಗಳಿದ್ದು, ಇದು ಮೆದುಳಿನ ಕಾರ್ಯಕ್ಷಮತೆಗೆ ಸಹಾಯ ಮಾಡುತ್ತದೆ.
ನೆದರ್ಲ್ಯಾಂಡ್ಸ್ನ ಮಾಸ್ಟ್ರಿಕ್ಟ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಸಂಶೋಧಕರು 60ರಿಂದ 75 ವರ್ಷ ವಯಸ್ಸಿನವರ ಮೇಲೆ ಅಧ್ಯಯನ ನಡೆಸಿದ್ದಾರೆ.
ಪ್ರತಿದಿನ 60 ಗ್ರಾಂ ಕಡಲೆಕಾಯಿ ಸೇವಿಸಿದವರಲ್ಲಿ ಮೆದುಳಿಗೆ ರಕ್ತದ ಹರಿವು ಶೇ. 3.6ರಷ್ಟು ಹಾಗೂ ಮೌಖಿಕ ನೆನಪಿನ ಸಾಮರ್ಥ್ಯ ಶೇ. 5.8ರಷ್ಟು ಸುಧಾರಿಸಿರುವುದು ಕಂಡುಬಂದಿದೆ.