
ಜಪಾನ್ನ ಚಿಬಾ ಪ್ರಿಫೆಕ್ಚರ್ನಲ್ಲಿ 2018ರಲ್ಲಿ ಸ್ಥಾಪಿಸಲಾಗಿದ್ದ 13.7 ಮೆಗಾವ್ಯಾಟ್ ಸಾಮರ್ಥ್ಯದ ಬೃಹತ್ ತೇಲುವ ಸೌರ ಸ್ಥಾವರವು 2019ರ ಸೆಪ್ಟೆಂಬರ್ನಲ್ಲಿ ಟೈಫೂನ್ ಅಬ್ಬರಕ್ಕೆ ನಾಶವಾಗಿತ್ತು.
ಸುಮಾರು 200 ಕಿಲೋ ಮೀಟರ್ ವೇಗದ ಗಾಳಿಯಿಂದಾಗಿ ಸ್ಥಾವರದ 7 ಆಂಕರ್ಗಳು ಹಾರಿಹೋಗಿ 50 ಸೌರ ಫಲಕಗಳು ಸುಟ್ಟುಹೋಗಿದ್ದವು, ಇದರಿಂದ ವಾರ್ಷಿಕ 16,170 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅಡ್ಡಿಯಾಗಿತ್ತು.
ನಂತರ ಎಂಜಿನಿಯರ್ಗಳು ದೋಷಗಳನ್ನು ಸರಿಪಡಿಸಿ, 2021ರ ಅಕ್ಟೋಬರ್ ಹೊತ್ತಿಗೆ ಸಣ್ಣ ದ್ವೀಪಗಳ ಮಾದರಿಯಲ್ಲಿ ಸ್ಥಾವರವನ್ನು ಪುನರ್ ವಿನ್ಯಾಸಗೊಳಿಸಿ ಯಶಸ್ವಿಯಾಗಿ ಪುನರ್ ಸ್ಥಾಪಿಸಿದ್ದಾರೆ.