
ಅಮೆರಿಕವು ಬಹಿರಂಗವಾಗಿ ಮಿಲಿಟರಿ ದಾಳಿಯ ಬೆದರಿಕೆ ಹಾಕುತ್ತಲೇ, ರಹಸ್ಯವಾಗಿ ಸಂಧಾನಕ್ಕೆ ಪ್ರಯತ್ನಿಸುತ್ತಿದೆ ಎಂದು ಇರಾನ್ ಸಂಸದ ಹಸನ್ ಘಷ್ಘವಿ ಗಂಭೀರ ಆರೋಪ ಮಾಡಿದ್ದಾರೆ.
ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಇರಾನ್ ಮೇಲೆ ಮತ್ತೊಂದು ಹಂತದ ಬೃಹತ್ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇನೆಗೆ ಸೂಚನೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದ ಇರಾನ್ ನಿಯಮಗಳನ್ನು ಅಮೆರಿಕ ಒಪ್ಪಿಕೊಳ್ಳಬೇಕೆಂದು ಘಷ್ಘವಿ ಆಗ್ರಹಿಸಿದ್ದು, ವಾರಾಂತ್ಯದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.