
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಹಲವು ಮ್ಯೂಚುವಲ್ ಫಂಡ್ ಸಂಸ್ಥೆಗಳು ಗೋಲ್ಡ್ ಮತ್ತು ಗೋಲ್ಡ್-ಸಿಲ್ವರ್ ಯೋಜನೆಗಳಲ್ಲಿ ಹೊಸ ಹೂಡಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಈ ನಿರ್ಬಂಧವು ಮುಖ್ಯವಾಗಿ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಗೋಲ್ಡ್ ಫಂಡ್ ಆಫ್ ಫಂಡ್ಸ್ ಯೋಜನೆಗಳ ಮೇಲೆ ಪರಿಣಾಮ ಬೀರಿದೆ.
ಚಿನ್ನದ ಆಮದು ವೆಚ್ಚದಿಂದ ದೇಶದ ಆಮದು-ರಫ್ತು ಸಮತೋಲನದ ಮೇಲೆ ಉಂಟಾಗುವ ಒತ್ತಡವನ್ನು ನಿಯಂತ್ರಿಸಲು ಈ ಕ್ರಮ ಮಹತ್ವ ಪಡೆದಿದೆ.