
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ದಿಲೀಪ್ ಕುಮಾರ್ ಹಾಗೂ ಗ್ಯಾಸ್ ಬಾಬು ಬೆಂಬಲಿಗರ ನಡುವೆ ವಾಗ್ವಾದ ನಡೆದು ಗಲಾಟೆಯಾಗಿದೆ.
ಟಿಕೆಟ್ ಆಕಾಂಕ್ಷಿ ಗ್ಯಾಸ್ ಬಾಬು ಅವರ ಭಾಷಣಕ್ಕೆ ದಿಲೀಪ್ ಬೆಂಬಲಿಗರು ಅಡ್ಡಿಪಡಿಸಿದಾಗ, ಗ್ಯಾಸ್ ಬಾಬು ವೇದಿಕೆಯಿಂದ ಕೆಳಗೆ ಬಂದು ವಾಗ್ವಾದಕ್ಕಿಳಿದರು.
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಧ್ಯಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಿ ಎಚ್ಚರಿಕೆ ನೀಡಿದರು.