
ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ 18ರಿಂದ 45 ವರ್ಷ ವಯಸ್ಸಿನವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಕ್ಕೆ ಆನುವಂಶಿಕ ಕಾರಣಗಳು ಹಾಗೂ ಧೂಮಪಾನ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ.
ದೇಶದ 25 ಆಸ್ಪತ್ರೆಗಳಲ್ಲಿ 767 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಶೇ 80.1ರಷ್ಟು ಮಂದಿ 31ರಿಂದ 45 ವರ್ಷ ವಯಸ್ಸಿನವರಾಗಿದ್ದು, ಶೇ 56.3ರಷ್ಟು ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಧೂಮಪಾನ ಮಾಡುವವರಲ್ಲಿ ಹೃದಯಾಘಾತದ ಅಪಾಯ 3.5 ಪಟ್ಟು ಹೆಚ್ಚಿದ್ದು, ಕುಟುಂಬದಲ್ಲಿ ಇತಿಹಾಸವಿದ್ದವರು ವೈದ್ಯರ ಸಲಹೆಯಿಲ್ಲದೆ ತೀವ್ರ ವ್ಯಾಯಾಮ ಮಾಡಬಾರದೆಂದು ಸಂಶೋಧಕರು ಎಚ್ಚರಿಸಿದ್ದಾರೆ.