
ಹೊರ್ಮುಜ್ ಜಲಸಂಧಿಯನ್ನು ದಾಟುವ ವೇಳೆ ಪನಾಮ ಧ್ವಜ ಹೊಂದಿದ್ದ 'ಎಂಟಿ ಆನ್ ಪೀಸ್' ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಹಡಗಿನಲ್ಲಿದ್ದ 12 ಮಂದಿ ಭಾರತೀಯ ಸಿಬ್ಬಂದಿಗೆ ಗಾಯಗಳಾಗಿವೆ.
ಒಮಾನ್‌ನ ಅಧಿಕಾರಿಗಳ ನೆರವಿನಿಂದ ಗಾಯಾಳುಗಳನ್ನು ತಕ್ಷಣವೇ ತೆರವುಗೊಳಿಸಿ ಖಾಸಬ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕೊಲ್ಲಿ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ತೀವ್ರ ಕಳವಳ ತಂದಿದ್ದು, ಜಲಮಾರ್ಗದಲ್ಲಿ ಶಾಂತಿ ಸ್ಥಾಪಿಸುವಂತೆ ಭಾರತ ಒತ್ತಾಯಿಸಿದೆ.