
ಆಸ್ಟ್ರಿಯಾದ ವಿಯೆನ್ನಾದಲ್ಲಿ ಮನೆಯೊಂದರ ನೆಲಮಾಳಿಗೆ ನವೀಕರಣ ಮಾಡುತ್ತಿದ್ದ ಪ್ಲಂಬರ್‌ಗೆ ಕಾಂಕ್ರೀಟ್ ನೆಲದಡಿ ಅಡಗಿದ್ದ 20 ಕೋಟಿ ರೂ. ಮೌಲ್ಯದ 30 ಕೆ.ಜಿ ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಈ ನಾಣ್ಯಗಳು ಎರಡನೇ ಮಹಾಯುದ್ಧದ ಕಾಲದವುಗಳಾಗಿದ್ದು, ಪ್ರತಿಯೊಂದರ ಮೇಲೂ ಸಂಗೀತ ಸಂಯೋಜಕ ಮೊಜಾರ್ಟ್ ಅವರ ಭಾವಚಿತ್ರವಿದೆ.
ಆಸ್ಟ್ರಿಯಾದ ಕಾನೂನಿನ ಪ್ರಕಾರ, ಪತ್ತೆಯಾದ ನಿಧಿಯನ್ನು ಆಸ್ತಿಯ ಮಾಲೀಕರು ಮತ್ತು ನಿಧಿ ಪತ್ತೆ ಮಾಡಿದ ವ್ಯಕ್ತಿ ಸಮಾನವಾಗಿ ಹಂಚಿಕೊಳ್ಳಬೇಕಾಗಿರುವುದರಿಂದ ಪ್ಲಂಬರ್‌ಗೆ 10 ಕೋಟಿ ರೂ. ಸಿಗಲಿದೆ.