
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ನ ಸ್ಟೇರಿಂಗ್ ದಿಢೀರ್ ಕಟ್ ಆಗಿ ಪಲ್ಟಿಯಾದ ಘಟನೆ ನಡೆದಿದೆ.
ತಾಂತ್ರಿಕ ದೋಷವನ್ನು ತಕ್ಷಣವೇ ಗ್ರಹಿಸಿದ ಚಾಲಕ ಕನಕರಾಜ್, ಬಸ್ ವೇಗವನ್ನು ತಗ್ಗಿಸಿ ರಸ್ತೆ ಪಕ್ಕದ ಗದ್ದೆಗೆ ಇಳಿಸಿದ್ದರಿಂದ ಭಾರಿ ಜೀವಹಾನಿ ತಪ್ಪಿದೆ.
ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರನ್ನು ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.