
ಬೆಂಗಳೂರಿನ ಬಾಗಲಗುಂಟೆ ಬೈರವೇಶ್ವರನಗರದಲ್ಲಿ ರಾತ್ರಿ ಮಲಗಿದ್ದ ಅಣ್ಣತಂಗಿಯ ಕೋಣೆಗೆ ಕಿಟಕಿಯ ಮೂಲಕ ನಾಗರಹಾವು ಪ್ರವೇಶಿಸಿದೆ.
ಬೆಳಿಗ್ಗೆ ಯುವತಿ ಹೇರ್ಪಿನ್ ಹುಡುಕುವಾಗ ತಲೆದಿಂಬಿನ ಕೆಳಗೆ ಅವಿತಿದ್ದ ನಾಗರಹಾವನ್ನು ಮುಟ್ಟಿದ್ದು, ತಕ್ಷಣ ಇಬ್ಬರೂ ಹೊರಗೆ ಓಡಿಬಂದಿದ್ದಾರೆ.
ನಂತರ ಸ್ನೇಕ್ ನಾಗೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು, ಅವರು ಬಂದು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.