
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಸೆಂಟ್ರಲ್ ಮತ್ತು ಈಸ್ಟ್ ಝೋನ್ ತಂಡಗಳು ತಲಾ 266 ರನ್ ಗಳಿಸಿ ಪ್ರಥಮ ಇನಿಂಗ್ಸ್‌ನಲ್ಲಿ ಸಮಬಲ ಸಾಧಿಸಿವೆ.
ಪಂದ್ಯ ಡ್ರಾಗೊಂಡರೆ ವಿಜೇತರನ್ನು ನಿರ್ಧರಿಸಲು ಬಿಸಿಸಿಐ ನಿಯಮದಂತೆ ಎರಡೂ ಇನಿಂಗ್ಸ್‌ಗಳ ಒಟ್ಟಾರೆ 'ರನ್ ಸರಾಸರಿ'ಯನ್ನು ಲೆಕ್ಕಹಾಕಲಾಗುತ್ತದೆ.
ಒಂದು ವೇಳೆ ರನ್ ಸರಾಸರಿಯೂ ಸಮಬಲಗೊಂಡರೆ, ತಂಡಗಳ ಕ್ವೋಶಿಯಂಟ್ ಲೆಕ್ಕಾಚಾರದ ಆಧಾರದ ಮೇಲೆ ಫೈನಲ್‌ಗೆ ಪ್ರವೇಶಿಸುವ ತಂಡವನ್ನು ನಿರ್ಧರಿಸಲಾಗುವುದು.