
ತಂತ್ರಾಂಶ ಉನ್ನತೀಕರಣ ಕಾರ್ಯದ ಹಿನ್ನೆಲೆಯಲ್ಲಿ ಬಾಗೇಪಲ್ಲಿ, ದೇವನಹಳ್ಳಿ, ನೆಲಮಂಗಲ ಸೇರಿದಂತೆ 20 ಪಟ್ಟಣಗಳಲ್ಲಿ ಸೆಪ್ಟೆಂಬರ್ 16 ಹಾಗೂ 17ರಂದು ಬೆಸ್ಕಾಂ ಆನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ.
ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಬಿಲ್ ಪಾವತಿ, ನೂತನ ಸಂಪರ್ಕ ಅರ್ಜಿ ಹಾಗೂ ಹೆಸರು ಬದಲಾವಣೆ ಸೇವೆಗಳು ಲಭ್ಯವಿರುವುದಿಲ್ಲ.
ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಅತ್ಯಾಧುನಿಕ ಡಿಜಿಟಲ್ ಸೇವೆಗಳನ್ನು ಕಲ್ಪಿಸಲು ಹೊಸ ಐಟಿ ಅಪ್ಲಿಕೇಶನ್ ಅನ್ನು ಅಳವಡಿಸಲಾಗುತ್ತಿದೆ.