
ಚಾರಣಿಗರ ಸುರಕ್ಷತೆ ಮತ್ತು ವನ್ಯಜೀವಿ ದಾಳಿ ತಡೆಯಲು ಅರಣ್ಯ ಇಲಾಖೆಯು ರಾಜ್ಯದ 39 ನಿಯಮಿತ ಚಾರಣ ಮಾರ್ಗಗಳಲ್ಲಿ ಹೊಸ ಕಾರ್ಯಾಚರಣೆ ನಿಯಮಾವಳಿ (SOP) ಜಾರಿಗೆ ತಂದಿದೆ.
ಇನ್ನು ಮುಂದೆ ಚಾರಣಿಗರ ಸಂಖ್ಯೆಯನ್ನು 'ಕ್ಯಾರಿಯಿಂಗ್ ಕೆಪಾಸಿಟಿ' ಆಧಾರದ ಮೇಲೆ ಮಿತಿಗೊಳಿಸಲಾಗುವುದು ಮತ್ತು ಚಾರಣಿಗರ ಚಲನವಲನ ಗಮನಿಸಲು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.
ನಿಯಮ ಉಲ್ಲಂಘಿಸುವ ಚಾರಣಿಗರು ಹಾಗೂ ಅನಧಿಕೃತ ಗೈಡ್‌ಗಳನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲಾಗುವುದು ಮತ್ತು ವನ್ಯಜೀವಿಗಳ ಸಂಚಾರ ಹೆಚ್ಚಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಚಾರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.