
ಟಿಬೆಟ್‌ನಲ್ಲಿ 45 ನಿಮಿಷಗಳ ಅಂತರದಲ್ಲಿ 7.0 ಹಾಗೂ 5.0 ತೀವ್ರತೆಯ ಎರಡು ಪ್ರಮುಖ ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ರಾತ್ರಿ 8.03ಕ್ಕೆ ಅರುಣಾಚಲ ಪ್ರದೇಶದ ಪಾಂಡಿನ್‌ನಿಂದ 489 ಕಿ.ಮೀ ವಾಯುವ್ಯಕ್ಕೆ 173 ಕಿ.ಮೀ ಆಳದಲ್ಲಿ 7.0 ತೀವ್ರತೆಯ ಭೂಕಂಪನ ದಾಖಲಾಗಿದೆ.
ಈ ಭೂಕಂಪಗಳಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿ ಬಂದಿಲ್ಲ.