
ಬಿಹಾರದ ಶಾಸಕಿ ಹಾಗೂ ಗಾಯಕಿ ಮೈಥಿಲಿ ಠಾಕೂರ್ ಮುಂಬೈನ ಲಾಲ್‌ಬಾಗ್‌ಚಾ ರಾಜ ಗಣಪತಿ ದರ್ಶನಕ್ಕೆ ನೀಲಿ ಬಣ್ಣದ ರೋಲ್ಸ್ ರಾಯ್ಸ್ ಕಾರಿನಲ್ಲಿ ಆಗಮಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.
ರಾಜಕಾರಣಿಯಾಗಿ ಇಷ್ಟೊಂದು ದುಬಾರಿ ಕಾರಿನಲ್ಲಿ ಬಂದಿದ್ದಕ್ಕೆ ವ್ಯಕ್ತವಾದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಸಂಸದೆ ಕಂಗನಾ ರಣಾವತ್, ರಾಜಕಾರಣಿಗಳು ಕೂಡ ಚೆನ್ನಾಗಿ ಬಾಳಬಾರದೇ ಎಂದು ಮೈಥಿಲಿ ಬೆಂಬಲಕ್ಕೆ ನಿಂತಿದ್ದಾರೆ.
ಮೈಥಿಲಿ ಠಾಕೂರ್ ಅವರು 2025ರ ಚುನಾವಣಾ ಅಫಿಡವಿಟ್‌ನಲ್ಲಿ ಒಟ್ಟು 3.82 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರೂ, ರೋಲ್ಸ್ ರಾಯ್ಸ್ ಕಾರಿನ ಉಲ್ಲೇಖ ಮಾಡಿರಲಿಲ್ಲ.