
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರು ಗ್ರಾ.ಪಂ. ಪಿಡಿಒ ಶಶಿಧರ್ ಅವರು 15ನೇ ಹಣಕಾಸು ಯೋಜನೆಯ 1.5 ಕೋಟಿ ರೂ.ಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಓ ಕೆ.ಆರ್. ನಂದಿನಿ ಅವರು ರಚಿಸಿದ ವಿಶೇಷ ತನಿಖಾ ತಂಡವು ಡಿ.ಸಿ. ಬಿಲ್ಗಳನ್ನು ಪರಿಶೀಲಿಸಿದಾಗ ಹಣ ಲೂಟಿಯಾಗಿರುವುದು ಸಾಕ್ಷಿ ಸಮೇತ ಪತ್ತೆಯಾಗಿದೆ.
ಈ ಹಿಂದೆ ಹಲಗೂರು ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುವಾಗಲೂ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿದ್ದ ಶಶಿಧರ್, ಇದೀಗ ಎರಡನೇ ಬಾರಿಗೆ ಅಮಾನತಿನ ಬಲೆಗೆ ಬಿದ್ದಿದ್ದಾರೆ.