Entertainment
ಫಹಾದ್ ಫಾಸಿಲ್ ಜನಪ್ರಿಯತೆ ಶ್ಲಾಘಿಸಿದ ರಾಜಮೌಳಿ

ಫಹಾದ್ ಫಾಸಿಲ್ ಜನಪ್ರಿಯತೆ ಶ್ಲಾಘಿಸಿದ ರಾಜಮೌಳಿ

tv9kannada2h
THE BRIEF
1

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು 'ಡೋಂಟ್ ಟ್ರಬಲ್ ದಿ ಟ್ರಬಲ್' ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಭಾಗವಹಿಸಿ ಮಲಯಾಳಂ ನಟ ಫಹಾದ್ ಫಾಸಿಲ್ ಅವರ ಅಭಿನಯ ಮತ್ತು ಜನಪ್ರಿಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

2

ಫಹಾದ್ ಅವರ ಜನಪ್ರಿಯತೆ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಸಾಮಾನ್ಯ ಪ್ರೇಕ್ಷಕರ ಮನಸ್ಸನ್ನು ತಲುಪಿದೆ ಎಂದು ಬಣ್ಣಿಸಿದ ಅವರು, ತೆಲುಗು ನಾಡಿನಲ್ಲಿ ಅವರ ಕ್ರೇಜ್ ಕೊರೊನಾಗಿಂತಲೂ ತೀವ್ರವಾಗಿ ಹರಡಿದೆ ಎಂದು ತಮಾಷೆಯಾಗಿ ತಿಳಿಸಿದರು.

3

ಫಹಾದ್ ಫಾಸಿಲ್ ನಾಯಕನಾಗಿ ನಟಿಸಿರುವ 'ಡಾಂಟ್ ಟ್ರಬಲ್ ದಿ ಟ್ರಬಲ್' ಚಿತ್ರವು ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.