Health & Environment
ದಸರಾ ರಜೆ: ಆಗುಂಬೆ ಘಾಟಿಯಲ್ಲಿ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್

ದಸರಾ ರಜೆ: ಆಗುಂಬೆ ಘಾಟಿಯಲ್ಲಿ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್

tv9kannada1h
THE BRIEF
1

ರಾಜ್ಯದಲ್ಲಿ ದಸರಾ ರಜೆ ಇರುವುದರಿಂದ ಉಡುಪಿ, ಮಂಗಳೂರು ಹಾಗೂ ಶಿವಮೊಗ್ಗ ಮಾರ್ಗದಲ್ಲಿ ಪ್ರವಾಸಿಗರ ದಂಡು ಹರಿದುಬಂದಿದ್ದು, ಆಗುಂಬೆ ಘಾಟಿಯಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

2

ಶಿವಮೊಗ್ಗ-ಉಡುಪಿ ಸಂಪರ್ಕ ರಸ್ತೆಯಲ್ಲಿ ವಾಹನಗಳು ಸುಮಾರು ಒಂದು ಗಂಟೆ ಕಾಲ ಸಾಲುಗಟ್ಟಿ ನಿಂತ ಪರಿಣಾಮ ಪ್ರವಾಸಿಗರು ತೀವ್ರ ಪರದಾಟ ಅನುಭವಿಸಿದರು.

3

ಈ ದಟ್ಟಣೆಯ ನಡುವೆ ಘಾಟಿಯ ಮಧ್ಯಭಾಗದಲ್ಲಿ ಖಾಸಗಿ ಬಸ್ ಕೆಟ್ಟು ನಿಂತಿದ್ದರಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು, ಸ್ಥಳೀಯ ಪೊಲೀಸರು ವಾಹನಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.