
ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ಕ್ಷೇತ್ರದ ರಾಜಾಂಗಣದಲ್ಲಿ ನಡೆದ ಯಕ್ಷಗಾನದಲ್ಲಿ ಮುಸ್ಲಿಂ ಯುವತಿ ಅರ್ಷಿಯಾ ಖಾನ್ ಅಷ್ಟಭುಜೆ ಶ್ರೀದೇವಿಯ ಪಾತ್ರ ನಿರ್ವಹಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಬಾಲ್ಯದಿಂದಲೂ ಯಕ್ಷಗಾನ ಕರಗತ ಮಾಡಿಕೊಂಡಿರುವ ಇವರು, ದೇವಿಯ ಪಾತ್ರಕ್ಕಾಗಿ ಕಟ್ಟುನಿಟ್ಟಿನ ಸಾತ್ವಿಕ ಸಸ್ಯಾಹಾರಿ ಆಹಾರ ಪದ್ಧತಿ ಮತ್ತು ಧಾರ್ಮಿಕ ವ್ರತಾಚರಣೆ ಪಾಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರಿಂದ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿದ್ದರೂ, ಕರಾವಳಿಯ ಬಹುಪಾಲು ಜನರು ಮತ್ತು ಕಲಾವಿದರು ಈಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.