
ನದಿ ದಾಟುವಾಗ ನೀರಿನ ರಭಸಕ್ಕೆ ಕಷ್ಟಪಡುತ್ತಿದ್ದ ಮರಿಯಾನೆಗೆ ತಾಯಾನೆ ಆಸರೆಯಾಗಿ ನಿಂತು ಸುರಕ್ಷಿತವಾಗಿ ದಡ ಸೇರಿಸಿದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಶೀಶ್ ಜೈನ್ ಎಂಬುವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ತಾಯಿಯ ಪ್ರೀತಿ ಮತ್ತು ಕಾಳಜಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ಆನೆಗಳ ಹಿಂಡು ನದಿಯನ್ನು ದಾಟುತ್ತಿದ್ದಾಗ ಮರಿಯಾನೆ ನೀರಿನಲ್ಲಿ ಪರದಾಡುತ್ತಿತ್ತು, ತಕ್ಷಣವೇ ತಾಯಾನೆ ಮಧ್ಯಪ್ರವೇಶಿಸಿ ತನ್ನ ಮರಿಯನ್ನು ಜೋಪಾನವಾಗಿ ಕರೆದೊಯ್ದಿದೆ.