
ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಹಾರ್ಮೋನ್‌ಗಳ ಬದಲಾವಣೆ ಮತ್ತು ದೈಹಿಕ ಕಾರಣಗಳಿಂದಾಗಿ ಮಹಿಳೆಯರಿಗೆ ಪುರುಷರಿಗಿಂತ ಸರಾಸರಿ 11 ನಿಮಿಷ ಹೆಚ್ಚು ನಿದ್ರೆಯ ಅಗತ್ಯವಿರುತ್ತದೆ.
ಮುಟ್ಟಿನ ಅವಧಿ, ಗರ್ಭಾವಸ್ಥೆ ಮತ್ತು ಮೆನೋಪಾಸ್ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನ್ ಏರುಪೇರುಗಳು ಮಹಿಳೆಯರ ನಿದ್ರೆಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತವೆ.
ನಿದ್ರೆಯ ಕೊರತೆಯಿಂದಾಗಿ ದಿನವಿಡೀ ಆಯಾಸ, ಏಕಾಗ್ರತೆಯ ಕೊರತೆ ಮತ್ತು ಕೆಲಸದ ಸಾಮರ್ಥ್ಯದಲ್ಲಿ ಇಳಿಕೆ ಕಂಡುಬರುವುದರಿಂದ, ಮಹಿಳೆಯರು ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.