Health & Environment
ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿಸುವ ಆಲೋಚನೆ ಇಲ್ಲ

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿಸುವ ಆಲೋಚನೆ ಇಲ್ಲ

prajavani1h
THE BRIEF
1

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ತಕ್ಷಣವೇ ಶೇ. 20ಕ್ಕಿಂತ ಹೆಚ್ಚು ಮಾಡುವ ಯಾವುದೇ ಆಲೋಚನೆಯನ್ನು ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.

2

ಇ20 ಇಂಧನದಿಂದ ವಾಹನಗಳ ಎಂಜಿನ್ ಸಂಪೂರ್ಣ ಹಾಳಾಗುತ್ತಿದೆ ಎಂಬ ವರದಿಗಳು ಕೃತಕವಾಗಿ ಸೃಷ್ಟಿಸಲ್ಪಟ್ಟ ಸಂಕಥನಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

3

ದೇಶದಲ್ಲಿ ಪ್ರತಿನಿತ್ಯ ಕೋಟ್ಯಂತರ ವಾಹನಗಳು ಸಂಚರಿಸುತ್ತಿದ್ದು, ಇಂಧನದಿಂದ ಹಾನಿಯಾಗಿದ್ದರೆ ಅಂತಹ ಸಮಸ್ಯೆಗಳು ಎಲ್ಲೆಡೆಯೂ ಗೋಚರಿಸಬೇಕಿತ್ತು ಎಂದರು.