
ಅಕ್ಟೋಬರ್ 1ರಿಂದ ರಿಯಾಯಿತಿ ದರದಲ್ಲಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಸೆಪ್ಟೆಂಬರ್ 19ರ ವೇಳೆಗೆ ದೇಶದ ಶೇ. 89.9 ರಷ್ಟು ಅಂದರೆ ಸುಮಾರು 27.43 ಕೋಟಿ ಸಕ್ರಿಯ ಗ್ರಾಹಕರು ಈ ದೃಢೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಆಧಾರ್ ದೃಢೀಕರಣ ಮಾಡದ ಗ್ರಾಹಕರಿಗೆ ಗ್ಯಾಸ್ ಪೂರೈಕೆ ನಿಲ್ಲುವುದಿಲ್ಲವಾದರೂ, ಅವರು ಸಬ್ಸಿಡಿ ರಹಿತ ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಪಡೆಯಬೇಕಾಗುತ್ತದೆ.