Indian Politics
ಗದಗ: ಸಿಂಗಟಾಲೂರ ನೀರಾವರಿ ಯೋಜನೆ ಪರಿಹಾರಕ್ಕಾಗಿ ಡಿಸಿ, ಎಡಿಸಿ ಕಾರು ಜಪ್ತಿ

ಗದಗ: ಸಿಂಗಟಾಲೂರ ನೀರಾವರಿ ಯೋಜನೆ ಪರಿಹಾರಕ್ಕಾಗಿ ಡಿಸಿ, ಎಡಿಸಿ ಕಾರು ಜಪ್ತಿ

tv9kannada1h
THE BRIEF
1

ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡು ದಶಕಗಳಾದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿ ಮತ್ತು ಎಡಿಸಿ ಕಾರುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.

2

ಮುಂಡರಗಿ ತಾಲೂಕಿನ ಮೇವುಂಡಿ ಹಾಗೂ ತಾಮ್ರಗುಂಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನೂರಾರು ಎಕರೆ ಜಮೀನು ಕಳೆದುಕೊಂಡು ನ್ಯಾಯಾಲಯದ ಮೊರೆ ಹೋಗಿದ್ದರು.

3

14 ಪ್ರಕರಣಗಳಲ್ಲಿ ಒಟ್ಟು 12 ಕೋಟಿ ರೂ.ಗೂ ಅಧಿಕ ಪರಿಹಾರ ಬರಬೇಕಿದ್ದು, ಒಂದು ಎಕರೆಗೆ 40 ರಿಂದ 60 ಲಕ್ಷ ರೂ. ಪರಿಹಾರ ನೀಡದ ಕಾರಣ ಜಿಲ್ಲಾಡಳಿತದ ಪೀಠೋಪಕರಣ ಹಾಗೂ ಕಾರುಗಳನ್ನು ಜಪ್ತಿ ಮಾಡಲಾಗಿದೆ.